|
ಚನ್ನರಾಯಪಟ್ಟಣದ ಕೋಟೆ ಚಂದ್ರಮೌಳೇಶ್ವರ ದೇಗುಲ *ಟಿ.ಎಂ. ಸತೀಶ್
ಈ ದೇವಾಲಯದಲ್ಲಿ ಶಿವನಿಗೆ ಮೂರ್ತಿಪೂಜೆ ನಡೆಯುವುದು ವಿಶೇಷ. ಪುರಾಣ ಕಥೆಗಳ ರೀತ್ಯ ಭೃಗು ಮಹರ್ಷಿಗಳ ಶಾಪದ ಫಲವಾಗಿ ಬ್ರಹ್ಮದೇವರಿಗೆ ಭೂಮಿಯಲ್ಲಿ ಪೂಜೆಯಿಲ್ಲ. ಶಿವನನ್ನು ಲಿಂಗರೂಪದಲ್ಲಿ ಮಾತ್ರವೇ ಪೂಜಿಸುತ್ತಾರೆ. ಅಂದರೆ ಶಿವನಿಗೆ ಮೂರ್ತಿಪೂಜೆ ನಿಷಿದ್ಧ. ಆದರೆ, ಚನ್ನರಾಯಪಟ್ಟಣದ ಕೋಟೆಯಲ್ಲಿರುವ ಈ ಪುರಾತನ ದೇವಾಲಯದಲ್ಲಿ ನಂದಿಯಿರುವ ಪೀಠದ ಮೇಲೆ ನಿಂತಿರುವ ಸುಂದರ ಶಿವನ ವಿಗ್ರಹವಿದೆ.
ಚಂದ್ರಶೇಖರ ಸ್ವಾಮಿಗೆ ಪ್ರತಿ ವರ್ಷ ಮಾಘ ಶುದ್ಧ ಪೌರ್ಣಿಮೆಯಲ್ಲಿ ಅನೇಕ ಉತ್ಸವಾದಿಗಳು ನಡೆಯುತ್ತವೆ. ದೊಡ್ಡ ಬಸವಣ್ಣನ ಗುಡಿ ಎಂದೂ ಖ್ಯಾತವಾದ ಈ ದೇವಾಲಯದಲ್ಲಿ ಸುಂದರವಾದ ಬಸವಣ್ಣನ ಮೂರ್ತಿಯಿದೆ. ಪ್ರಾಕಾರದಲ್ಲಿರುವ ಮತ್ತೊಂದು ಗರ್ಭಗೃಹದಲ್ಲಿ ಗೌರಮ್ಮನ ವಿಗ್ರಹವಿದೆ. ಕಮಲ ಹಿಡಿದ ದೇವಿಯ ಸುಂದರ ಕೃಷ್ಣ ಶಿಲೆಯ ವಿಗ್ರಹ ಮನಮೋಹಕವಾಗಿದೆ. ಹಿಂದಿನ ಪ್ರಭಾವಳಿಯಲ್ಲಿ ಹಾಗೂ ಕಿರೀಟದಲ್ಲಿ ಸೂಕ್ಷ್ಮ ಕೆತ್ತನೆ ಇದೆ. ದೇವಾಲಯದಲ್ಲಿ ಸುಂದರವಾದ ಅಮೃತಶಿಲೆಯ ಶಿವಲಿಂಗವಿದೆ. ನಿತ್ಯವೂ ದೇವರಿಗೆ ಪೂಜೆ, ಪುನಸ್ಕಾರಗಳು ಶೈವಾಗಮದ ರೀತ್ಯ ನಡೆಯುತ್ತದೆ.
ಸಂಪರ್ಕ: ಉಪ ನಿರ್ದೇಶಕರು ಮತ್ತು ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಹಾಸನ, ದೂರವಾಣಿ 08172-267345. ಅಥವಾ ಸಹಾಯಕ ನಿರ್ದೇಶಕರು, ಪ್ರದಾಶಿಕ ಪ್ರವಾಸೋದ್ಯಮ ಅಧಿಕಾರಿಗಳ ಕಾರ್ಯಾಲಯ, ಹಾಸನ. 08172-268862. | |||