|
ಮುಖಪುಟ
/ನಮ್ಮದೇವಾಲಯಗಳು
ಬಸವನ ಬಾಗೇವಾಡಿ
ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ
ಪುಣ್ಯಭೂಮಿ ನೋಡಲೇಬೇಕಾದ ಸ್ಥಳ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು
ಆಗಮಿಸುತ್ತಾರೆ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿಯ ದರ್ಶನದಿಂದ
ಪುನೀತರಾಗುತ್ತಾರೆ.
ಐತಿಹ್ಯ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಬಸವಣ್ಣನವರು, ತಮ್ಮ ಉಪನಯನದ ಬಳಿಕ, ಮೇಲು -ಕೀಳೆಂಬ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸಲು ಯಜ್ಞೋಪವೀತವನ್ನು ಕಿತ್ತು ಹಾಕಿ, ಸಂಗಮಕ್ಕೆ ಹೋದರೆಂದು ಹೇಳಲಾಗಿದೆ. ಆಗ ಕಳಚೂರ್ಯ ಬಿಜ್ಜಳನ ಬಳಿ ದಂಡಾಧಿಶನಾಗಿದ್ದ ಇವರ ಸೋದರಮಾವ ಬಲದೇವ ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಕೊಟ್ಟು ಮದುವೆ ಮಾಡಿದರು.ನಂತರ ಬಸವೇಶ್ವರರು ಬಿಜ್ಜಖನ ಇನ್ನೊಬ್ಬ ದಂಡನಾಯಕ ಸಿದ್ಧರಸನ ಮಗಳು ನೀಲಾಂಬಿಕೆಯನ್ನು ವರಿಸಿದರು. ಬಿಜ್ಜಳನ ಭಂಡಾರದ ಮಂತ್ರಿಯಾಗಿ, ಹಲವು ಕ್ರಾಂತಿಕಾರಿ ಕ್ರಮಕೈಗೊಂಡ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಕಲ್ಪನೆ ಜೀವನಾದರ್ಶವಾಗಿದೆ. ವಚನಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಜನ್ಮಭೂಮಿ ಇಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಬಸವನಬಾಗೇವಾಡಿ ಎಂದೇ ಖ್ಯಾತವಾಗಿದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in | |||