ಮುಖಪುಟ /ನಮ್ಮದೇವಾಲಯಗಳು  

ಬಸರಾಳು ಮಲ್ಲಿಕಾರ್ಜುನ ದೇವಸ್ಥಾನ

*ಟಿ.ಎಂ.ಸತೀಶ್

basaralu mallikarjuna temple, ಬಸರಾಳು ಮಲ್ಲಿಕಾರ್ಜುನ ದೇವಾಲಯ, ಚಿತ್ರ ಕೃಪೆ, ಮಂಡ್ಯ ಜಿಲ್ಲೆಯ ಅಧಿಕೃತ ವೆಬ್ ತಾಣಕನ್ನಡರತ್ನ.ಕಾಂ, kannadaratna.com, ourtemples.in, ಕರ್ನಾಟಕದ ದೇವಾಲಯಗಳು, karnataka temples,ಕರ್ನಾಟಕದ ಪ್ರಸಿದ್ಧ ದೇವಾಲಯಗಳ ಪೈಕಿ ಮಂಡ್ಯ ಜಿಲ್ಲೆ ಬಸರಾಳು ಗ್ರಾಮದಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವೂ ಒಂದು. ಹೊಯ್ಸಳರ ಕಲಾವೈಭವದಿಂದ ಶ್ರೀಮಂತವಾಗಿರುವ ಈ ದೇವಾಲಯ ಮನಮೋಹಕವಾಗಿದ್ದು ನಾಸ್ತಿಕರನ್ನು ಹಾಗೂ ಆಸ್ತಿಕರನ್ನೂ ಕೈಬೀಸಿ ಕರೆಯುತ್ತಿದೆ.

ಮೂರು ಗರ್ಭಗುಡಿಗಳನ್ನು ಹೊಂದಿರುವ ದೇವಾಲಯ ತ್ರಿಕೂಟಾಚಲ ಎಂದೇ ಖ್ಯಾತವಾಗಿದೆ. ಗರ್ಭಗುಡಿಗಳಲ್ಲಿ ಮಲ್ಲಿಕಾರ್ಜುನ, ಸೂರ್ಯನಾರಾಯಣ ಹಾಗೂ ನಾಗ ನಾಗಿಣಿಯರ ವಿಗ್ರಹವಿದೆ. ಎಲ್ಲ ಹೊಯ್ಸಳ ದೇವಾಲಯಗಳಂತೆ ಈ ದೇವಾಲಯವೂ ನಾಲ್ಕಡಿ ಎತ್ತರದ ನಕ್ಷತ್ರಾಕಾರದ ಜಗತಿಯ ಮೇಲಿದೆ.

ದೇವಾಲಯದ ಒಳ ಪ್ರವೇಶಿಸಲು 8-10 ಮೆಟ್ಟಿಲುಗಳಿವೆ. ಮೆಟ್ಟಿಲುಗಳ ಎರಡೂ ಕಡೆಗಳಲ್ಲಿ ಗೋಪುರಾಕಾರದ ಪುಟ್ಟ ಗುಡಿಗಳಿವೆ. ಐದು ಮೆಟ್ಟಿಲುಗಳೇರುತ್ತಿದ್ದಂತೆ ಪ್ರವೇಶದ್ವಾರದ ಎರಡೂ ಬದಿಯಲ್ಲಿರುವ ಆನೆಗಳ ಸುಂದರ ಮೂರ್ತಿ ಮನಸೆಳೆಯುತ್ತವೆ.

basaralu mallikarjuna temple, ಬಸರಾಳು ಮಲ್ಲಿಕಾರ್ಜುನ ದೇವಾಲಯ,  ಮಂಡ್ಯಕನ್ನಡರತ್ನ.ಕಾಂ, kannadaratna.com, ourtemples.in, ಕರ್ನಾಟಕದ ದೇವಾಲಯಗಳು, karnataka temples,ದೇವಾಲಯದ ಹೊರ ಭಿತ್ತಿಗಳಲ್ಲಿ ಸುಂದರ ಹಾಗೂ ಸೂಕ್ಷ್ಮ ಕಲಾಕೆತ್ತನೆಗಳಿವೆ. ಕೆಳಭಾಗದಲ್ಲಿರುವ ಆರು ಸಾಲುಗಳ ಪಟ್ಟಿಕೆಗಳಲ್ಲಿ ಪುರಾಣದ ಕಥೆಗಳು, ಮಕರ, ಹಂಸ, ಅಶ್ವಾರೂಢ ಸೈನಿಕರು, ಲತೆಯೇ ಮೊದಲಾದ ಶಿಲ್ಪಾಲಂಕಾರಣಗಳಿವೆ.  ದೇವಾಲಯಕ್ಕೆ ಗಾಳಿ ಬೆಳಕು ಬರಲೆಂದು ಹೊರಭಿತ್ತಿಗಳಲ್ಲಿ ಕಲಾತ್ಮಕ ಚಾಲಂದ್ರಗಳನ್ನು ಅಳವಡಿಸಲಾಗಿದೆ.

ಈ ದೇವಾಲಯವನ್ನು ಹೊಯ್ಸಳ ದೊರೆ ಎರಡನೇ ನರಸಿಂಹನ ಕಾಲದಲ್ಲಿ ಅಂದರೆ 1234ರಲ್ಲಿ ಹರಿಹರ ದಂಡನಾಯಕ ನಿರ್ಮಿಸಿದನೆಂದು ತಿಳಿದುಬರುತ್ತದೆ. ದೇವಾಲಯದಲ್ಲಿರುವ  16 ಕೈಗಳ ನೃತ್ಯಭಂಗಿಯ ನಟರಾಜ ಮೂರ್ತಿ, 22 ಭುಜಗಳ ದುರ್ಗಾ ಮಾತೆ, ಮತ್ತು ಸರಸ್ವತಿಯ ಮೂರ್ತಿಗಳು ಮನಮೋಹಕವಾಗಿವೆ.

ರಾವಣ ಕೈಲಾಸಗಿರಿಯನ್ನು ಎತ್ತುತ್ತಿರುವ ದೃಶ್ಯ, ಮತ್ಸ್ಯಯಂತ್ರ ಭೇದಿಸುತ್ತಿರುವ ಅರ್ಜುನ, ಮಾಲೆ ಹಿಡಿದ ದ್ರೌಪದಿ ಮೊದಾಲದ ಶಿಲ್ಪ ಕಥಾನಕಗಳು ಮನಸೂರೆಗೊಳ್ಳುತ್ತವೆ.   

ಮಂಡ್ಯದಿಂದ 35 ಕಿಲೋ ಮೀಟರ್ ದೂರದಲ್ಲಿರುವ ಬಸರಾಳುವಿಗೆ ನೇರ ಬಸ್ ಸೌಕರ್ಯವಿದೆ.

ಮುಖಪುಟ /ನಮ್ಮದೇವಾಲಯಗಳು