|
ಮುಖಪುಟ
/ನಮ್ಮ
ದೇವಾಲಯಗಳು ನಾಲ್ಕು ಬಸದಿಗಳ ಬೆಟ್ಟ ಮಂದರಗಿರಿ *ಟಿ.ಎಂ.ಸತೀಶ್
ಭಾರತದ ಬೃಹತ್ ಏಕಶಿಲಾ ಬೆಟ್ಟಗಳಲ್ಲಿ ಒಂದೆಂದು ಖ್ಯಾತವಾಗಿರುವ ಈ ಬೆಟ್ಟದ ತುದಿಗೆ ಹೋಗಲು ಬೆಟ್ಟವನ್ನೇ ಕಡಿದು ಮೆಟ್ಟಿಲುಗಳನ್ನು ಮಾಡಲಾಗಿದೆ. ಮೆಟ್ಟಿಲೇರಿ ಮೇಲೆ ಹೋಗುವುದು ತುಸು ಕಷ್ಟದ ಕೆಲಸವೇ ಸರಿ, ಹೀಗಾಗಿ ಪೂರ್ವಸಿದ್ಧತೆ ಅತ್ಯಗತ್ಯ. ಕುಡಿಯುವ ನೀರು ಕೊಂಡೊಯ್ಯದಿದ್ದರೆ ಹುಸ್ಸಪ್ಪ ಎಂದು ಮಧ್ಯದಲ್ಲೇ ದಣಿವಾರಿಸಿಕೊಳ್ಳಲು ಕೂರುವುದು ಅನಿವಾರ್ಯವಾಗುತ್ತದೆ.
ಬಸದಿ ಬೆಟ್ಟದಲ್ಲಿ ಮಟ್ಟಸವಾದ ವಿಶಾಲ ಪ್ರದೇಶದಲ್ಲಿ ನಾಲ್ಕು ಜೈನ ಬಸದಿಗಳಿವೆ. ಒಂದು ಬಸದಿಯಲ್ಲಿ ಜೈನತೀರ್ಥಂಕರರಾದ ಚಂದ್ರನಾಥರ ಅಮೃತಶಿಲೆಯ ಸುಂದರ ವಿಗ್ರಹವಿದೆ. ಅನತಿ ದೂರದಲ್ಲಿ ಕೃಪಾಶ್ವನಾಥರ ಪುರಾತನ ಬಸದಿ ಇದೆ. ಪಕ್ಕದದಲ್ಲಿ ಪಾಶ್ವನಾಥರ ಬಸದಿ ಇದೆ.
ಈ ಬಸದಿಯ ಬಾಗಿಲ
ಎಡ ಭಾಗದಲ್ಲಿ ಒಂದೇ ಒಂದು ಆನೆಯ ಶಿಲ್ಪವಿದೆ. ಗರ್ಭಗೃಹದಲ್ಲಿ ಏಳು ಹೆಡೆ ಸರ್ಪವನ್ನು
ತಲೆಯ
ಇಲ್ಲಿನ ಕಲ್ಲಿನ ಹಾಸಿನ ಮೇಲೆ ಬೃಹದಾಕಾರದ ಪಾದದ ಕೆತ್ತನೆ ಇದೆ. ಇದನ್ನು ಭೀಮಪಾದ ಎಂದು ಕರೆಯಲಾಗುತ್ತದೆ. ಈ ನಾಲ್ಕೂ ಜಿನ ಮಂದಿರಗಳಲ್ಲಿ ಒಂದು ವೈಶಿಷ್ಟ್ಯವಿದೆ ಈ ಯಾವ ಬಸದಿಗೂ ಬಾಗಿಲುಗಳೇ ಇಲ್ಲ. ಎಲ್ಲವನ್ನೂ ತೊರೆದು ವೈರಾಗ್ಯಮೂರ್ತಿಯಾದ ಬಾಹುಬಲಿಯ ಅನುಯಾಯಿಗಳಾದ ತೀರ್ಥಂಕರರ ಗುಡಿಯಲ್ಲಿ ಕದ್ದು ಒಯ್ಯುವಂಥದ್ದೇನೂ ಇಲ್ಲ. ಎಲ್ಲ ತೊರೆದವರಿಗೆ ಬಾಗಿಲುಗಳ ಬಂಧವೇಕೆ ಎಂಬುದನ್ನು ಇದು ಸಾರುವಂತಿದೆ. ಬೆಟ್ಟದ ಮೇಲೆ ಶಿಲಾ ಶಾಸನಗಳೂ ಇವೆ.
| |||