|
ಮುಖಪುಟ
/ನಮ್ಮದೇವಾಲಯಗಳು
ಬಂಗಾರ
ತಿರುಪತಿಯ ಶ್ರೀವೆಂಕಟರಮಣಸ್ವಾಮಿ ದೇವಾಲಯ
ತಿರುಪತಿ
ಗಿರಿವಾಸ ಶ್ರೀವೆಂಕಟೇಶ ನೀನೊಲಿದ ಮನೆ ಮನೆಯು ಲಕ್ಷ್ಮೀ ನಿವಾಸ... ಎಂಬ ಗೀತೆಯನ್ನು
ಕೇಳಿದ್ದೀರಲ್ಲವೇ. ತಿರುಪತಿಯಲ್ಲಿ ನೆಲೆಸಿಹ ಶ್ರೀನಿವಾಸ ವೆಂಕಟೇಶ, ವೆಂಕಟೇಶ್ವರ,
ಗೋವಿಂದ ಎಂಬೆಲ್ಲಾ ಹೆಸರಿನಿಂದ ಭಕ್ತರನ್ನು ಹರಸಲು ತಿರುಮಲೆಯ ಮೇಲೆ ನೆಲೆ
ನಿಂತಿದ್ದಾನೆ. ಆದರೆ
ಎಲ್ಲರಿಗೂ ತಿರುಪತಿಗೆ ಹೋಗಿ ಗೋವಿಂದನ ದರ್ಶನ ಪಡೆಯುವುದು ಸಾಧ್ಯವಿಲ್ಲದ ಮಾತು.
ಹೀಗಾಗೇ ಶ್ರೀನಿವಾಸದೇವರು ನಾನಾ ಪುಣ್ಯಕ್ಷೇತ್ರಗಳಲ್ಲಿ ನೆಲೆ ನಿಂತಿದ್ದಾನೆ
ಎನ್ನುತ್ತದೆ ಪುರಾಣ. ಬ್ರಹ್ಮಾನಂದ ಪುರಾಣದ ರೀತ್ಯ ಇರುವುದು ಒಂದೇ ಒಂದು
ತಿರುಪತಿಯಲ್ಲ. ಭರತವರ್ಷದಲ್ಲಿ 108 ತಿರುಪತಿಗಳಿವೆ ಎನ್ನುತ್ತದೆ ಪುರಾಣ. ಇಂಥ
108 ತಿರುಪತಿಗಳಲ್ಲಿ ಬಂಗಾರ ತಿರುಪತಿ ಎಂದು ಖ್ಯಾತವಾದ ಗುಟ್ಟಹಳ್ಳಿಯೂ ಒಂದು.
ಕೋಲಾರ ಜಿಲ್ಲೆಯ ಕೆ.ಜಿ.ಎಫ್.ಗೆ ಸನಿಹದಲ್ಲಿರುವ ಗುಟ್ಟಹಳ್ಳಿಯ ಬೆಟ್ಟದ ಮೇಲೆ
ಪದ್ಮಾವತಿ ಸಮೇತನಾಗಿ ಶ್ರೀನಿವಾಸ ನೆಲೆಸಿದ್ದಾನೆ. ಭಕ್ತರನ್ನು ಹರಸುತ್ತಿದ್ದಾನೆ.
ಹೀಗಾಗೇ ಈ ಕ್ಷೇತ್ರಕ್ಕೆ ಬಂಗಾರ ತಿರುಪತಿ ಎಂಬ ಹೆಸರೂ ಬಂದಿದೆ.
ಬೆಟ್ಟಗುಡ್ಡಗಳಿಂದ ಕೂಡಿದ ಈ ಪ್ರದೇಶದಲ್ಲಿ ದಟ್ಟವಾದ ಅರಣ್ಯವೂ ಇದ್ದು, ಹಚ್ಚ
ಹಸುರಿನ ವನರಾಶಿಯ ಸುಂದರ ತಾಣದಲ್ಲಿ ಶ್ರೀನಿವಾಸ ದೇವರು ಕಲಿಯುಗದ ಆರಂಭದಲ್ಲೇ
ನೆಲೆನಿಂತನೆನ್ನುತ್ತಾರೆ ಇಲ್ಲಿನ ಅರ್ಚಕರು,
ನವದಂಪತಿಗಳು ಶೇಷಾಚಲದಲ್ಲಿ ವಹರಿಸುತ್ತಿದ್ದಾಗ, ಅಲ್ಲಿಗೆ ಬಂದ ಲಕ್ಷ್ಮೀ
–
ಪದ್ಮಾವತಿಯರ ನಡುವೆ ಕಲಹವೇರ್ಪಡುತ್ತದೆ. ಆಗ ಏನೂ ಮಾತನಾಡದೆ ನಿಂತ ವಿಷ್ಣುವನ್ನು
ಲಕ್ಷ್ಮೀ ಏಕೆ ಕಲ್ಲಾಗಿ ನಿಂತಿದ್ದೀರಿ ಎನ್ನಲು ಶ್ರೀನಿವಾಸ ಶೇಷಾಚಲದಲ್ಲಿ ಕಲ್ಲಾಗಿ
ನಿಲ್ಲುತ್ತಾನೆ. ಹೀಗೆ ನೆಲೆನಿಂತ ಬಂಗಾರದ ನಿಕ್ಷೇಪದಿಂದ ಕೂಡಿದ ಶೇಷಾಚಲವೇ
ತಿರುಪತಿ, ಅದುವೇ ಬಂಗಾರು ತಿರುಪತಿ ಎಂಬುದು ಭಕ್ತರ ನಂಬಿಕೆ.
ಇಲ್ಲಿ ನೆಲೆನಿಂತಿರುವ ಶ್ರೀನಿವಾಸ ದೇವರನ್ನು ಉಡುಪಿಯ ಶ್ರೀಕೃಷ್ಣನನ್ನು ಕನಕನ
ಕಿಂಡಿಯಲ್ಲಿ ನೋಡುವಂತೆ ನೋಡಬೇಕು. ವೆಂಕಟೇಶನನ್ನು ಹೀಗೆ ನೋಡುವುದಕ್ಕೆ ನೇತ್ರ
ದರ್ಶನ ಎಂದೂ ಹೆಸರುಂಟು.
ಪ್ರತಿವರ್ಷ ಮಾಘ ಮಾಸದಲ್ಲಿ ಈ
ಕ್ಷೇತ್ರದಲ್ಲಿ 9 ದಿನಗಳ ಕಾಲ ಬ್ರಹ್ಮೋತ್ಸವ ವಿಜೃಂಭಣೆಯಿಂದ ಜರುಗುತ್ತದೆ.
ಇಲ್ಲಿಗೆ ಬರುವ ಭಕ್ತಾದಿಗಳು
ಕಲ್ಯಾಣಿಯಲ್ಲಿ ಮಿಂದು ದೇವರ ದರ್ಶನ ಪಡೆಯುತ್ತಾರೆ. ಬೆಟ್ಟದ ಮೇಲೆ ನಿಂತು ಸುಂದರ
ಪ್ರಕೃತಿಯನ್ನು ನೋಡುವುದೇ ಒಂದು ಸೊಬಗು.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-2352901 /2352909 /2352903
Email : kstdc@vsnl.in | |||