|
ಮುಖಪುಟ
/ನಮ್ಮದೇವಾಲಯಗಳು
ಬೆಂಗಳೂರಿನ ಕೋಟೆ
ಶ್ರೀ ವೆಂಕಟರಮಣಸ್ವಾಮಿ ಸನ್ನಿಧಿ
*ಟಿ.ಎಂ.ಸತೀಶ್
ಟಿಪ್ಪು ಸುಲ್ತಾನರು ಕಟ್ಟಿಸಿದ ಬೇಸಿಗೆ ಅರಮನೆ ಹಿಂದಿರುವ ಈ ಸುಂದರ ಶಿಲಾ
ದೇವಾಲಯವನ್ನು ಚಿಕ್ಕ
ದೇವರಾಜ ಒಡೆಯರು 1695ರಲ್ಲಿ ಕಟ್ಟಿಸಿದರೆಂದು ಶಾಸನದಿಂದ ತಿಳಿದುಬರುತ್ತದೆ.
ದ್ರಾವಿಡ ಶೈಲಿಯಲ್ಲಿರುವ ಈ ದೇವಾಲಯ ವಿಜಯನಗರ ಅರಸರ ಕಾಲದ ವಾಸ್ತುಶೈಲಿಯನ್ನು
ಒಳಗೊಂಡಿದೆ.
ದೇವಾಲಯದ ಮುಂಭಾಗದಲ್ಲಿ ಏಕಶಿಲೆಯ ಎಂಟು ಮೂಲೆಗಳ ಬೃಹತ್ ಗರುಡಗಂಬವಿದೆ. ಕಂಬದ ಅಡಿ
ಭಾಗದಲ್ಲಿ ಶಂಖ,
ಚಕ್ರ, ನಾಮ ಹಾಗೂ ಗರುಡ,
ದೇವಾಲಯದ ಭಿತ್ತಿಗೆ ಹೊಂದಿಕೊಂಡಂತೆ ಇರುವ ಕಂಬಗಳಲ್ಲಿ ಗೋಡಿಯಿಂದ ಮುಂದೆ
ಚಾಚಿದಂತಿರುವ ಕೆತ್ತನೆಯಲ್ಲಿ ಆನೆ ಮತ್ತು ಸಿಂಹದ ಮೇಲೆ ಕುಳಿತ ವೀರರ ಶಿಲ್ಪಗಳಿವೆ.
ಮುಖ್ಯ ಪ್ರವೇಶದ್ವಾರಕ್ಕೆ ನೇರವಾಗಿ ಇರುವ ಪ್ರಧಾನ ಗರ್ಭಗುಡಿಯಲ್ಲಿ ಪ್ರಸನ್ನ
ವೆಂಕಟರಮಣ ಸ್ವಾಮಿಯ ಸುಂದರ ಮೂರ್ತಿಯಿದೆ.
ಗರ್ಭಗೃಹದ ಎರಡೂ ಪಕ್ಕದಲ್ಲಿ ಜಯವಿಜಯರ ಆಳೆತ್ತರದ ಮೂರ್ತಿಗಳಿವೆ. ವೆಂಕಟರಮಣ
ಸ್ವಾಮಿಯ ಗರ್ಭಗುಡಿಯ ಎಡ ಭಾಗದಲ್ಲಿರುವ ಹೊರಗೋಡೆಯ ಒಂದು ಪಟ್ಟಿಕೆಯಲ್ಲಿ ಬಸವನ
ಮೇಲೆ ಕುಳಿತ ಶಿವ ಪಾರ್ವತಿ, ಗರಡನ ಮೇಲೆ ಕುಳಿತ ವಿಷ್ಣು,
ಹಂಸಪಕ್ಷಿಯ ಮೇಲೆ ಕುಳಿತ ಬ್ರಹ್ಮ,
ಗಾಯತ್ರಿ
ದೇವಿ, ಗಿರಿಜಾ
ಕಲ್ಯಾಣ,
ಸಪ್ತರ್ಷಿಗಳು
ಮತ್ತು ಸಪ್ತಮಾತೃಕೆಯರ ಸುಂದರ ಉಬ್ಬುಶಿಲ್ಪಗಳಿವೆ.
ದೇವಾಲಯದ ಎಡ ಮತ್ತ
ಬಲಭಾಗದಲ್ಲಿ ಇತ್ತೀಚೆಗೆ ವಿಸ್ತರಣೆ ಮಾಡಲಾಗಿದ್ದು, ಆಧುನಿಕ
ಈ ದೇವಾಲಯದಲ್ಲಿ
ಶ್ರೀನಿವಾಸಕಲ್ಯಾಣವೇ ಮೊದಲಾದ ಹಲವು ಸೇವಾಕಾರ್ಯಗಳು ನಡೆಯುತ್ತದೆ. ವೈಕುಂಠ
ಏಕಾದಶಿಯಂದು ಹಾಗೂ ಶ್ರಾವಣ ಶನಿವಾರಗಳಂದು ಇಲ್ಲಿ ವಿಶೇಷ ಪೂಜೆ ಜರುಗುತ್ತದೆ.
ಪ್ರತಿ ಶನಿವಾರ ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಬೆಂಗಳೂರಿನ ಯಾವುದೇ
ಬಡಾವಣೆಯಿಂದ ಕೃಷ್ಣರಾಜ ಮಾರುಕಟ್ಟೆಗೆ ಹೋಗುವ ಬಸ್ಸಿನಲ್ಲಿ ಹೋದರೆ ಈ ದೇವಾಲಯಕ್ಕೆ
ಹೋಗಬಹುದು. | |||