|
ಮುಖಪುಟ
/ನಮ್ಮದೇವಾಲಯಗಳು
ಬೆಂಗಳೂರಿನ ಬನಶಂಕರಿ
ದೇವಾಲಯ
*ಟಿ.ಎಂ.ಸತೀಶ್
ಕನಕಪುರ ಬೆಂಗಳೂರು ಮುಖ್ಯರಸ್ತೆಯಲ್ಲೇ ಇರುವ ಈ ದೇವಾಲಯಕ್ಕೆ ಭವ್ಯವಾದ ಪ್ರವೇಶ
ಗೋಪುರವಿದೆ. ಗೋಪುರ ಪ್ರವೇಶಿಸಿದರೆ ವಿಶಾಲವಾದ ಆವರಣವಿದೆ.
ಆವರಣದಲ್ಲಿ ತಾಯಿ ಬನಶಂಕರಿಯ ದೇವಾಲಯವಿದೆ.
ದೇವಾಲಯದ ಮುಂಭಾಗದಲ್ಲಿ ಕಲ್ಲಿನ ಕಂಬಗಳಿದ್ದು, ಮೇಲ್ಭಾಗದಲ್ಲಿ ಅರ್ಧಚಂದ್ರಾಕೃತಿಯ
ಗೋಪುರವಿದೆ. ಗೋಪುರದ ಅಕ್ಕ ಪಕ್ಕದಲ್ಲಿ ಖಡ್ಗ ಹಾಗೂ ತ್ರಿಶೂಲ ಹಿಡಿದ ಗಣಗಳ
ಪ್ರತಿಮೆ ಇದೆ. ಮಧ್ಯಭಾಗದಲ್ಲಿರುವ ಗೋಪುರದಲ್ಲಿ ಸಿಂಹದ ಮೇಲೆ ಕುಳಿತಿರುವ
ಬನಶಂಕರಿಯ ಗಾರೆಯ ಮೂರ್ತಿಯಿದೆ.
ಪ್ರತಿ ಮಂಗಳವಾರ, ಶುಕ್ರವಾರ
ರಾಹುಕಾಲದಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಹುಣ್ಣಿಮೆ ಹಾಗೂ ಅಮಾವಾಸ್ಯೆಯ
ದಿನವೂ ಇಲ್ಲಿ ವೈಭವದಿಂದ ಪೂಜೆ ನಡೆಯುತ್ತದೆ. ಬೆಂಗಳೂರು ಬಸ್ ನಿಲ್ದಾಣದಿಂದ ಹಾಗೂ ಕೃಷ್ಣರಾಜೇಂದ್ರ
ಮಾರುಕಟ್ಟೆಯಿಂದ, ಹೆಬ್ಬಾಳ, ಕೆಂಗೇರಿ, ಕೋರಮಂಗಲ ಮತ್ತು ಬೆಂಗಳೂರಿನ ಪ್ರಮುಖ
ಬಡಾವಣೆಗಳಿಂದ ಬನಶಂಕರಿಗೆ ನೇರ ಬಸ್ ಸೌಲಭ್ಯವಿದೆ. | |||