ಮುಖಪುಟ /ನಮ್ಮದೇವಾಲಯಗಳು  

ಬೆಂಗಳೂರಿನ ಬನಗಿರಿಯ ವರಸಿದ್ಧಿ ವಿನಾಯಕ ದೇವಾಲಯ

ಸರಸ್ವತಿ, ಲಕ್ಷ್ಮೀ, ಸುಬ್ರಹ್ಮಣ್ಯ ಸಹಿತ ಗಣಪತಿ ನೆಲೆಸಿಹ ಪುಟ್ಟ ಬೆಟ್ಟ

*ಟಿ.ಎಂ.ಸತೀಶ್

Banagiri varasiddi vinayaka temple, banashnkari, katriguppe, Devegowda petrol bunk, lord vinayaka, ಲಕ್ಷ್ಮೀ, ಸರಸ್ವತಿ, ವರಸಿದ್ದಿ ವಿನಾಯಕ ದೇವಾಲಯ, ಬನಗಿರಿ, ಸುಬ್ರಹ್ಮಣ್ಯ, temples in and around Bangalore, karnataka temples, ourtemples.in, T.M.Satishಬೆಂಗಳೂರು ಪದ್ಮನಾಭನಗರ ಬಳಿಯ ದೇವೇಗೌಡ ಪೆಟ್ರೋಲ್ ಬಂಕ್ ಪಕ್ಕದಲ್ಲೇ ಇರುವ ಶ್ರೀ ಭಾನು ತಿರುಮಲೆ ಬೆಟ್ಟದ ಮೇಲೆ ಬನಗಿರಿ ವರಸಿದ್ಧಿ ವಿನಾಯಕ ದೇವಾಲಯವಿದೆ. ಹೆಚ್ಚು ಜನರಿಗೆ ತಿಳಿದಿಲ್ಲದ ಈ ದೇವಾಲಯ ನಿರ್ಮಾಣವಾದದ್ದು 1988ರಲ್ಲಿ.

ಈ ದೇವಾಲಯ ಇಟ್ಟಿಗೆ ಸಿಮೆಂಟ್ ನ ಕಟ್ಟಡವಾಗಿದ್ದು, ಹೊರವರ್ತುಲ ರಸ್ತೆಯ ಕಡೆಯಿಂದ ಬರಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಕತ್ತರಿಗುಪ್ಪೆಯ ಮುಖ್ಯರಸ್ತೆಯ ಕಡೆ ಬೆಂಗಳೂರು ನಗರ ನೀರು ಸರಬರಾಜು ಮಂಡಳಿಯ ಕಡೆಯಿಂದಲೂ ದೇವಾಲಯಕ್ಕೆ ಪ್ರವೇಶವಿದೆ.

ದೇವಾಲಯಕ್ಕೆ ನಾಲ್ಕು ಕಂಬಗಳ ಪ್ರವೇಶದ್ವಾರವಿದೆ. ಮೇಲ್ಬಾಗದ ಗೋಪುರ ಗೂಡುಗಳಲ್ಲಿ ಲಕ್ಷ್ಮೀ ಹಾಗೂ ಸರತ್ವತಿ ಮತ್ತು ಗಣಪತಿಯ ಗಾರೆಯ ಶಿಲ್ಪಗಳಿವೆ. ಪ್ರವೇಶ ದ್ವಾರದ ಮೂಲಕ ಒಳ ಪ್ರವೇಶಿಸಿದರೆ, ಸೂರ್ಯ ದೇವ ಸಪ್ತ ಕುದುರೆಗಳ ರಥದಲ್ಲಿ ಕುಳಿತ ಗೋಪುರ ಇರುವ ಪುಟ್ಟ ಗುಡಿಯಲ್ಲಿ ನವಗ್ರಹಗಳ ದರ್ಶನವಾಗುತ್ತದೆ.

Banagiri varasiddi vinayaka temple, banashnkari, katriguppe, Devegowda petrol bunk, lord vinayaka, ಲಕ್ಷ್ಮೀ, ಸರಸ್ವತಿ, ವರಸಿದ್ದಿ ವಿನಾಯಕ ದೇವಾಲಯ, ಬನಗಿರಿ, ಸುಬ್ರಹ್ಮಣ್ಯ, temples in and around Bangalore, karnataka temples, ourtemples.in, T.M.Satishಪಕ್ಕದಲ್ಲಿಯೇ  ಸುಂದರವಾದ ಧ್ಯಾನ ಭಂಗಿಯಲ್ಲಿರುವ 10 ಅಡಿಗಳ ಶಿವನ ಗಾರೆಯ ಶಿಲ್ಪವಿದೆ. ತ್ರಿಶೂಲ, ಡಮರು ಹಿಡಿದು ಒಂದು ಕೈ ಮೇಲೆ ಮತ್ತೊಂದು ಕೈ ಇಟ್ಟುಕೊಂಡು ಸಿಂಹದ ಚರ್ಮದ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ಶಿವನ ಮೂರ್ತಿ ಸುಂದರವಾಗಿದೆ. ಪಕ್ಕದಲ್ಲೇ  ಬೃಹತ್ ದೇವಾಲಯವಿದ್ದು, ಛಾವಣಿಯ ಗೋಪುರದಲ್ಲಿ ಮೂರು ಗೋಪುರ ಗೂಡುಗಳಿದ್ದು ಒಂದರಲ್ಲಿ ಲಕ್ಷ್ಮೀ, ಮತ್ತೊಂದರಲ್ಲಿ ಸರತ್ವತಿಯ ಗಾರೆಯ ಶಿಲ್ಪವಿದೆ. ಮಧ್ಯದ ಗೋಪುರ ಗೂಡಿನಲ್ಲಿ ಮೂಷಿಕ, ನವಿಲು, ನಂದಿ ಹಾಗೂ ಸಿಂಹ ವಾಹನಗಳೊಂದಿಗೆ ಕೈಲಾಸಗಿರಿಯಲ್ಲಿ ಗಣಪತಿ, ಸುಬ್ರಹ್ಮಣ್ಯ ಹಾಗೂ ಪಾರ್ವತಿ ಸಹಿತನಾಗಿ ಕುಳಿತ ಪರಶಿವನ ಶಿಲ್ಪವಿದೆ.

Banagiri varasiddi vinayaka temple, banashnkari, katriguppe, Devegowda petrol bunk, lord vinayaka, ಲಕ್ಷ್ಮೀ, ಸರಸ್ವತಿ, ವರಸಿದ್ದಿ ವಿನಾಯಕ ದೇವಾಲಯ, ಬನಗಿರಿ, ಸುಬ್ರಹ್ಮಣ್ಯ, temples in and around Bangalore, karnataka temples, ourtemples.in, T.M.Satishವಿಶಾಲ ಅಂತರಾಳ, ಮುಖ ಮಂಟಪ ಒಳಗೊಂಡ ದೇವಾಲಯದಲ್ಲಿ ಮೂರು ಗರ್ಭಗೃಹವಿದ್ದು, ಮಧ್ಯದ ಗರ್ಭಗೃಹದಲ್ಲಿ ಪದ್ಮಪೀಠದ ಮೇಲೆ ಕುಳಿತ ಗಣಪತಿಯ ವಿಗ್ರಹವಿದೆ. ಅಂಕುಶ, ಪಾಶ ಹಾಗೂ ಮೋದಕ ಹಿಡಿದ ಗಣಪ ಅಭಯ ಹಸ್ತವನ್ನೂ ಹೊಂದಿದ್ದಾನೆ. ಬಲಭಾಗದ ಗರ್ಭಗೃಹದಲ್ಲಿ ಪದ್ಮಪೀಠದಲ್ಲಿ ಪದ್ಮಾಸನಹಾಕಿ ಎರಡು ಕೈಗಳಲ್ಲಿ ಕಮಲ ಹಾಗೂ ಅಭಯ, ವರದ ಹಸ್ತದ ಧನದೇವತೆ ಲಕ್ಷ್ಮೀ ವಿಗ್ರಹವಿದೆ.  ಎಡ ಭಾಗದ ಗರ್ಭಗೃಹದಲ್ಲಿ ಹಂಸಪೀಠದ ಮೇಲೆ ಅಕ್ಷಮಾಲೆ, ಅಂಕುಶ, ಪಾಶ ಮತ್ತು ಪುಸ್ತಕ ಹಿಡಿದ ವಿದ್ಯಾಧಿದೇವತೆ ಸರತ್ವತಿಯ ವಿಗ್ರಹವಿದೆ.

ದೇವಾಲಯ ಪ್ರತಿ ನಿತ್ಯ ಬೆಳಗ್ಗೆ 6.30ರಿಂದ 11.30ರವರೆಗೆ ಮತ್ತು ಸಂಜೆ 5.30ರಿಂದ 8.30ರವರೆಗೆ ತೆರೆದಿರುತ್ತದೆ.

Banagiri varasiddi vinayaka temple, banashnkari, katriguppe, Devegowda petrol bunk, lord vinayaka, ಲಕ್ಷ್ಮೀ, ಸರಸ್ವತಿ, ವರಸಿದ್ದಿ ವಿನಾಯಕ ದೇವಾಲಯ, ಬನಗಿರಿ, ಸುಬ್ರಹ್ಮಣ್ಯ, temples in and around Bangalore, karnataka temples, ourtemples.in, T.M.Satishದೇವಾಲಯದ ಆವರಣದಲ್ಲಿ ಸಭಾಭವನವೂ ಇದೆ.  ನಾಮಕರಣ, 60 ವರ್ಷದ ಶಾಂತಿ,  ಉಪನಯನವೇ ಮೊದಲಾದ ಶುಭಕಾರ್ಯಗಳೂ ನಡೆಯುತ್ತವೆ. ಸಭಾ ಭವನದ ಎದುರು ಸುಬ್ರಹ್ಮಣ್ಯ ದೇವರಿಗೆ ಪ್ರತ್ಯೇಕ ದೇವಾಲಯ ನಿರ್ಮಿಸಲಾಗಿದೆ.

ಇಲ್ಲಿ ಐದು ಹೆಡೆಗಳ ಹಾವಿನ ಹೆಡೆಯ ಮಧ್ಯದಲ್ಲಿ ಕೈಮುಗಿದು ನಿಂತಿರುವ ನಾಗ ಕನ್ನಿಕೆಯ ಗಾರೆಯ ಬೃಹತ್ ಶಿಲ್ಪವಿದೆ. ಹಿಂಭಾಗದಲ್ಲಿ ಮಯೂರ ವಾಹನನಾದ ಸುಬ್ರಹ್ಮಣ್ಯನ ಶಿಲಾಮೂರ್ತಿಯಿದೆ. ಸೊಂಟದ ಮೇಲೆ ಒಂದು ಕೈ ಇಟ್ಟುಕೊಂಡು, ಮತ್ತೊಂದು ಕೈಯಲ್ಲಿ ವೇಲಾಯುಧ ಹಿಡಿದಿರುವ ಹಾಗೂ ಅಭಯ ಮುದ್ರೆಯಲ್ಲಿರುವ  ಮೂರ್ತಿ ಸುಂದರವಾಗಿದೆ.

ಮಹಾ ಶಿವರಾತ್ರಿ, ನವರಾತ್ರಿ, ವಿನಾಯಕ ಚತುರ್ಥಿ, ಸಂಕಷ್ಟ ಹರ ಚತುರ್ಥಿ ಮೊದಲಾದ ಹಬ್ಬ ಹರಿದಿನಗಳಂದು ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕಗಳು ನಡೆಯುತ್ತದೆ.

 ವಿಶ್ವ ಹಿಂದೂ ಪರಿಷತ್ತಿನ ಬನಶಂಕರಿ ಜಿಲ್ಲಾ ಘಟಕ ಈ ದೇವಾಲಯದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದು. ಸ್ವಚ್ಛತೆಗೆ ಇಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ.

ಹೋಗುವುದು ಹೇಗೆ: ಬೆಂಗಳೂರು ಬಸ್ ನಿಲ್ದಾಣ, ಸಿಟಿ ಮಾರುಕಟ್ಟೆ, ಶಿವಾಜಿನಗರ, ಜಯನಗರ, ಕೋರಮಂಗಲ, ಕೆಂಗೇರಿ, ವಿಜಯನಗರ, ಉತ್ತರಹಳ್ಳಿ ಮೊದಲಾದ ಕಡೆಗಳಿಂದ ಇಲ್ಲಿಗೆ ನೇರ ಬಸ್ ಸೌಲಭ್ಯವಿದ್ದು, ದೇವೇಗೌಡ ಪೆಟ್ರೋಲ್ ಬಂಕ್ ನಿಲ್ದಾಣದಲ್ಲಿ ಇಳಿದರೆ ನಡೆದುಕೊಂಡು ಹೋಗಬಹುದು.

ಮುಖಪುಟ /ನಮ್ಮದೇವಾಲಯಗಳು