|
ಬನವಾಸಿಯ ಮಧುಕೇಶ್ವರ ದೇವಾಲಯ
ಇಂಥ ರಮಣೀಯವಾದ ಪುಣ್ಯತಾಣ
ಬನವಾಸಿ ವರದಾ ನದಿಯ ದಂಡೆಯ ಮೇಲಿದೆ. ಪೌರಾಣಿಕವಾಗಿಯೂ ಈ ಕ್ಷೇತ್ರ
ಮಹತ್ವದ್ದಾಗಿದೆ. ದ್ವಾಪರಯುಗದಲ್ಲಿ ಪಾಂಡವರು ತಮ್ಮ ವನವಾಸದ ಕೆಲ ಸಮಯವನ್ನು ಇಲ್ಲಿ
ಕಳೆದರೆಂದೂ, ಧರ್ಮರಾಜನ ಅಶ್ವಮೇಧ ಯಾಗ ಮಾಡಿದಾಗ, ಕುದುರೆಯ ಕಾವಲಿಗೆ ಹೊರಟ ಸಹದೇವ
ವನವಾಸಿಕಾ ಅರ್ಥಾತ್ ಬನವಾಸಿಯನ್ನು ಗೆದ್ದನೆಂದೂ ಉಲ್ಲೇಖವಿದೆ. ಪುರಾಣ ಕಾಲದಲ್ಲಿ
ವೈಜಯಂತಿ ಎಂದು ಕರೆಸಿಕೊಂಡಿದ್ದ ಈ ನಗರದಲ್ಲಿ ಮಧು-ಕೈಟಭರೆಂಬ ರಾಕ್ಷಸರಿದ್ದರಂತೆ.
ವಿಷ್ಣು ಇವರನ್ನು ಕೊಂದನಂತೆ. ಶಿವಭಕ್ತರಾದ ಈ
ಇಬ್ಬರು
ರಕ್ಕಸ ಹೆಸರಿನಲ್ಲಿ
ವರದಾನದಿಯಿಂದ ಸ್ವಲ್ಪವೇ ದೂರದಲ್ಲಿರುವ ಮಧುಕೇಶ್ವರ ದೇವಾಲಯ ಪ್ರಮುಖವಾದುದು. 3ನೆಯ ಶತಮಾನಕ್ಕೆ ಸೇರಿದ ಮಧುಕೇಶ್ವರ ದೇವಾಲಯದಲ್ಲಿರುವ ಐದುಹೆಡೆಯ ನಾಗಶಿಲ್ಪ, ಗರ್ಭಗೃಹದಲ್ಲಿರುವ ಮಧುಕೇಶ್ವರಲಿಂಗ, ಕಾರ್ತಿಕೇಯ, ಆದಿಮೂರ್ತಿ, ವೀರಭದ್ರ, ನರಸಿಂಹ, ಗಣಪತಿ, ವೆಂಕಟರಮಣ, ಅಷ್ಟದಿಕ್ಪಾಲಕ ನಯನ ಮನೋಹರವಾಗಿವೆ.
ದೇವಾಲಯದ ಸ್ತಂಭಗಳು
ಕಲಾತ್ಮಕವಾಗಿದ್ದು, ಕದಂಬ ಶೈಲಿಯ ದ್ಯೋತಕವಾಗಿದೆ.
ಸಾಲುಗಂಬಗಳ ಮಧ್ಯೆ ಇರುವ ಬೃಹದಾಕಾರದ ನಂದಿಯ ಮೂರ್ತಿ ಮನಮೋಹಕವಾಗಿದೆ. ಕದಂಬರ ಕಾಲದಲ್ಲಿ ಉಚ್ಛ್ರಾಯ
ಸ್ಥಿತಿಯಲ್ಲಿದ್ದ ಈ ಪುರದ ದೇವಾಲಯದ ಕಂಬಗಳ ಮೇಲಿರುವ ಹಲವು ದೇವತೆಗಳ ಮತ್ತು
ಪರಿವಾರ ದೇವತೆಗಳ ಶಿಲ್ಪಗಳು
ಕಲ್ಯಾಣ
ಚಾಲುಕ್ಯ-ಹೊಯ್ಸಳರ ಕಾಲದವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ದೇವಾಲಯದ ಕಂಬದ
ಮೇಲೆ ರಾಷ್ಟ್ರಕೂಟ,
ಕಲ್ಯಾಣ ಚಾಳುಕ್ಯ,
ವಿಜಯನಗರ ಮತ್ತು ಸೋದೆ ಅರಸರ ಹಲವಾರು ಶಾಸನಗಳು ದೊರೆತಿವೆ. ಮೌರ್ಯರ ಕಾಲದಲ್ಲಿಯೇ
ಇಷ್ಟು ಮನಮೋಹಕವೂ, ಪುರಾಣ ಪ್ರಸಿದ್ಧ ಹಾಗೂ 2000 ವರ್ಷಗಳ ಇತಿಹಾಸ ಪ್ರಸಿದ್ಧ ದೇವಾಲಯ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಮಳೆಗಾಲದಲ್ಲಿ ದೇವಾಲಯದ ಮಾಳಿಗೆ ಸೋರುತ್ತದೆ. ನೆಲದಲ್ಲಿ ಹಾಗೂ ಭಿತ್ತಿ, ಕಂಬಗಳಲ್ಲಿ ಪಾಚಿ ಕಟ್ಟಿದೆ. ಕಾಲಿಟ್ಟರೆ ಜಾರುವಂಥ ಸ್ಥಿತಿ ನಿರ್ಮಾಣವಾಗಿದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||