ಮುಖಪುಟ /ನಮ್ಮದೇವಾಲಯಗಳು  

ಬಾಲಾಂಜನೇಯ ಸ್ವಾಮಿ ದೇವಾಲಯ

* ಟಿ.ಎಂ.ಸತೀಶ್

Kannadaratna.com, our temples.in our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡ ಗಣಪನ ಗುಡಿಯ ಹಿಂಭಾಗದಲ್ಲಿರುವ ದೇವಾಲಯವೇ ಬಾಲಾಂಜನೇಯ ಸ್ವಾಮಿ ದೇವಾಲಯ. ಈ ದೇವಾಲಯ ಇತ್ತೀಚೆಗೆ ಅಂದರೆ ಸುಮಾರು 20 ವರ್ಷಗಳ ಹಿಂದಷ್ಟೇ ನಿರ್ಮಾಣವಾದದ್ದು.

ಈ ದೇವಾಲಯದಲ್ಲಿರುವ ಆಂಜನೇಯಸ್ವಾಮಿ ಬಂಡೆಯಲ್ಲಿ ಸ್ವಯಂ ರೂಪು ತಳೆದ ಕಾರಣ ಇಲ್ಲಿ ದೇವಾಲಯ ನಿರ್ಮಿಸಲಾಗಿದೆ.

ದೊಡ್ಡಗಣಪ, ದೊಡ್ಡ ಬಸವ ನೆಲೆನಿಂತ ಈ ಪುಣ್ಯ ಕ್ಷೇತ್ರ ಬೆಟ್ಟ ಗುಡ್ಡ, ಕಲ್ಲುಗಳಿಂದ ಆವರಿಸಲ್ಪಟ್ಟ ಸ್ಥಳ. ಇಲ್ಲಿ ಗಣಪತಿಯ ಗರ್ಭಗೃಹದ ಹಿಂಭಾಗದ ಬಂಡೆಯೊಂದರಲ್ಲಿ ಹನುಮಂತನ ಆಕೃತಿ ಮೂಡಿದ್ದನ್ನು ಗಮನಿಸಿದ ದೇವಾಲಯ ಮಂಡಳಿ ಇಲ್ಲಿ ಸುಂದರವಾದ ದೇವಾಲಯ ನಿರ್ಮಿಸಿದೆ.

ಪ್ರತಿ ನಿತ್ಯ ಇಲ್ಲಿ ಆಂಜನೇಯಸ್ವಾಮಿಗೆ 108 ವಿಳ್ಳೆದೆಲೆಯ ಅಲಂಕಾರ ಮಾಡಿ, ಪುಷ್ಪಗಳಿಂದ ಸಿಂಗರಿಸಲಾಗುತ್ತದೆ. ಪ್ರತಿ ಶನಿವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಶ್ರಾವಣ ಶನಿವಾರಗಳಲ್ಲಿ ದೇವರಿಗೆ ಬೆಣ್ಣೆ ಅಲಂಕಾರ ಮಾಡುವುದು ಇಲ್ಲಿನ ವಿಶೇಷ.

ನವರಾತ್ರಿಯ ಸಮಯದಲ್ಲಿ ಹತ್ತೂ ದಿನಗಳ ಕಾಲ ಆಂಜನೇಯಸ್ವಾಮಿಗೆ ಶ್ರೀಗಂಧ, ಕುಂಕುಮ, ಹರಿಶಿನ, ಚಂದನವೇ ಮೊದಲಾದ ದ್ರವ್ಯಗಳಿಂದ ಅಲಂಕರಿಸಲಾಗುತ್ತದೆ. ದೇವಾಲಯಕ್ಕೆ ನಿರ್ಮಿಸಲಾಗಿರುವ ಸುಂದರ ದೇವಾಲಯದ ಮೇಲೆ ಗೋಪುರವಿದ್ದು, ಗೋಪುರದಲ್ಲಿ ಧ್ಯಾನ ಮಗ್ನನಾಗಿ ಕುಳಿತ ಆಂಜನೇಯಸ್ವಾಮಿಯ ಮೂರ್ತಿಯಿದೆ.

ಶ್ರೀ ಕೃಷ್ಣ ಭಟ್ ಅವರು ದೇವಾಲಯದ ಅರ್ಚಕರಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅವರನ್ನು ದೂರವಾಣಿ ಸಂಖ್ಯೆ 9880932470 ಮೂಲಕ ಸಂಪರ್ಕಿಸಬಹುದು.

ಈ ದೇವಾಲಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ದೇವಾಲಯದ ಎದುರು ಶ್ರೀ ವಾಲ್ಮೀಕಿ ಆಶ್ರಮವಿದ್ದು, ಪಕ್ಕದಲ್ಲಿ ಬೇಡರ ಕಣ್ಣಪ್ಪನ ಗುಡಿ ಇದೆ.

ಮುಖಪುಟ /ನಮ್ಮದೇವಾಲಯಗಳು