ಮುಖಪುಟ /ನಮ್ಮದೇವಾಲಯಗಳು

ಅರಳಗುಪ್ಪೆಯ ಕಲ್ಲೇಶ್ವರ ದೇವಾಲಯ

ಅರಳುಗುಪ್ಪೆ ಉಮಾ ಮಹೇಶ್ವರ, kalleswara temple, ಕಲ್ಲೇಶ್ವರ ದೇವಾಲಯ, ಕನ್ನಡರತ್ನ.ಕಾಂ, kannadaratna.com,  ಅರಳುಗುಪ್ಪೆ ದೇವಾಲಯ, Araluguppe keshava templeತುರುವೇಕೆರೆ ಬಳಿಯ ಬಾಣಸಂದ್ರಕ್ಕೆ 5 ಕಿಲೋ ಮೀಟರ್ ಹಾಗೂ ಕಲ್ಪತರುವಿನ ನಾಡು ತಿಪಟೂರಿನಿಂದ 14 ಕಿಲೋ ಮೀಟರ್  ದೂರದಲ್ಲಿರುವ ಅರಳಗುಪ್ಪೆ ಹೊಯ್ಸಳರ ಕಾಲದ ಭವ್ಯ ದೇವಾಲಯಗಳ ತಾಣ.

ಈ ಊರಿನಲ್ಲಿ ಸುಂದರ ವಾಸ್ತುಶಿಲ್ಪದ ಕೇಶವ ದೇವಾಲಯ ಹಾಗೂ ಕಲ್ಲೇಶ್ವರ ದೇವಾಲಯಗಳಿವೆ. ಶಿವ ಹಾಗೂ ವಿಷ್ಣು ದೇವಾಲಯಗಳಿರುವ ತುಮಕೂರು ಜಿಲ್ಲೆಯ ಈ ಊರು ಸಹ ಹರಿಹರ ಕ್ಷೇತ್ರವೆಂದೇ ಖ್ಯಾತವಾಗಿದೆ.

ಬಳಪದ ಕಲ್ಲಿನ ಸುಂದರ ಕೇಶವ ದೇವಾಲಯದ ಈಶಾನ್ಯಕ್ಕೆ ಕಲ್ಲೇಶ್ವರ ದೇವಾಲಯವಿದೆ. ಇದು ಕೇಶವ ದೇವಾಲಯದಷ್ಟು ಆಕರ್ಷಕ ಹಾಗೂ ಸುಂದರ ಕೆತ್ತನೆಗಳಿಂದ ಕೂಡಿಲ್ಲದಿದ್ದರೂ, ದ್ರಾವಿಡಶೈಲಿಯ  ಈ ದೇವಾಲಯದ ಸುತ್ತು ಮುತ್ತ ಪಂಚಲಿಂಗ ದೇವಾಲಯಗಳಿವೆ. ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಗಿರುವ ಈ ಪಂಚ ಲಿಂಗ ದೇವಾಲಯಗಳ ಗರ್ಭಗುಡಿಗೆ ಅತ್ಯಾಧುನಿಕ ಟೈಲ್ಸ್ ಗಳನ್ನು ಹಾಕಿರುವ ಕಾರಣ ಶಿವಲಿಂಗಗಳೇ ಮಸುಕಾಗಿ, ತಮ್ಮ ಹಿಂದಿನ ವೈಭವವನ್ನು ಕಳೆದುಕೊಂಡಿವೆ. ನೈಜತೆಯಿಂದ ದೂರವಾಗಿವೆ.

ಕಲ್ಲೇಶ್ವರ ದೇವಾಲಯದ ಪೂರ್ವಾಭಿಮುಖವಾಗಿದ್ದು, ಕಲ್ಲಿನ ಬಾಗಿಲವಾಡದಲ್ಲಿ ಸುಂದರ ಕೆತ್ತನೆಗಳಿವೆ. ದೇವಾಲಯ ಅರಳುಗುಪ್ಪೆ ಕಲ್ಲೇಶ್ವರ ದೇವಾಲಯ, Araluguppe Kalleswara templeಪ್ರವೇಶಿಸುತ್ತಿದ್ದಂತೆ ಅಷ್ಟೇನೂ ಎತ್ತರವಿಲ್ಲದ ನವರಂಗದ ಮೇಲ್ಛಾವಣಿಯ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರ ಕೆತ್ತನೆ ಮನಸೆಳೆಯುತ್ತದೆ.

 ಈ ಶಿಲ್ಪದಲ್ಲಿ ಇಂದ್ರ, ಅಗ್ನಿ, ವಾಯು, ವರುಣ, ನಿಋತಿಯೇ ಮೊದಲಾದ ಎಲ್ಲ ದಿಕ್ಪಾಲಕರೂ ತಮ್ಮ ದಿಕ್ಕಿನ ಅಂಗನೆಯರನ್ನು ಅಪ್ಪಿ, ತಮ್ಮ ತಮ್ಮ ವಾಹನಗಳಲ್ಲಿ ಆಸೀನರಾಗಿರುವ ಸುಂದರ ಶಿಲ್ಪಗಳಿವೆ. ಅಷ್ಟದಿಕ್ಪಾಲಕರ ಮಧ್ಯದಲ್ಲಿ ಪ್ರಳಯಕಾಲದ ರುದ್ರತಾಂಡವನಾಟ್ಯ ಮಾಡುತ್ತಿರುವ ತಾಂಡವೇಶ್ವರನ ಸುಂದರ ಉಬ್ಬುಶಿಲ್ಪವಿದೆ. ಶಿವನ ನಡುವೆ ಸುತ್ತಲೂ ನಾಲ್ಕು ಮೂಲೆಗಳಲ್ಲಿ  ನಾಲ್ವರು ಮುನಿಗಳ ಪ್ರತಿಮೆಗಳಿವೆ. ಮುನಿಗಳು ಹಗ್ಗ ಹಿಡಿದು ಜೋತಾಡುತ್ತಿರುವಂತಿರುವುದು ವಿಶೇಷ.

ಅರಳುಗುಪ್ಪೆ ಉಮಾ ಮಹೇಶ್ವರ, kalleswara temple, ಕಲ್ಲೇಶ್ವರ ದೇವಾಲಯ, ಕನ್ನಡರತ್ನ.ಕಾಂ, kannadaratna.com,  ಅರಳುಗುಪ್ಪೆ ದೇವಾಲಯ, Araluguppe keshava templeಮಧ್ಯದಲ್ಲಿರುವ ಗರ್ಭಗೃಹದಲ್ಲಿ ಕಲ್ಲೇಶ್ವರನ ಶಿವಲಿಂಗವಿದೆ. ಶಿವನಿಗೆ ಎದುರಾಗಿ ಸುಮಾರು 10 ಅಡಿ ಉದ್ದ ಹಾಗೂ 6 ಅಡಿ ಎತ್ತರದ ನಂದಿಯ ಮೂರ್ತಿಯಿದೆ. ಬೂದು ಬಣ್ಣದ ಕಲ್ಲಿನ ಈ ನಂದಿಯ ಕೊರಳಲ್ಲಿ ಏಕಗಂಟೆಯ ಹಗ್ಗದ ಸರ, ಹಾಗೂ ಗಂಟೆಗಳ ಸರಗಳನ್ನು ಸುಂದರವಾಗಿ ಕೆತ್ತಲಾಗಿದೆ. ಬೆನ್ನ ಮೇಲೆ ಇರುವ ಪಟ್ಟಿಯಲ್ಲಿ ಸೂಕ್ಷ್ಮ ಕೆತ್ತನೆಯಿದೆ, ಪಕ್ಕದಲ್ಲಿ ಅಡ್ಡಲಾಗಿ ಮತ್ತೆ ಗಂಟೆಗಳ ಉದ್ದ ಪಟ್ಟಿಕೆಯಿದ್ದು ನಂದಿ ಆಕರ್ಷಕವಾಗಿದೆ.

ಇಲ್ಲಿರುವ ಮಂಟಪದ ದೇಗುಲದ ಕೆಲವು ಕಂಬಗಳು ಸುಂದರ ಕೆತ್ತನೆಯಿಂದ ಕೂಡಿದ್ದರೆ, ಮತ್ತೆ ಕೆಲವು ಸಾಧಾರಣ ಕಲ್ಲು ಕಂಬಗಳಾಗಿವೆ. ಪ್ರಾಕಾರದಲ್ಲಿ ವೀರಭದ್ರಮೂರ್ತಿ ಹಾಗೂ ಉಮಾಮಹೇಶ್ವರ ಮೂರ್ತಿ ಇದೆ.  ನಂದಿಯ ಪಕ್ಕದಲ್ಲಿ ಉತ್ತರಾಭಿಮುಖವಾಗಿರುವ ದೇವಾಲಯದಲ್ಲಿ ಅಪರೂಪದ ಉಮಾಮಹೇಶ್ವರನ ಮೂರ್ತಿಯಿದೆ. ಎಲ್ಲೆಡೆ ಶಿವನಿಗೆ ಲಿಂಗಪೂಜೆಯಾದರೆ ಇಲ್ಲಿ ಮೂರ್ತಿ ಪೂಜೆ ನಡೆಯುತ್ತದೆ. ಇಲ್ಲಿಶಿವ ತನ್ನ ಎಡಗೈಯಿಂದ ಪಾರ್ವತಿಯನ್ನು ಅಪ್ಪಿ, ತೊಡೆಯ ಮೇಲೆ ಕೂರಿಸಿಕೊಳ್ಳುತ್ತಿರುವ ಅಪರೂಪದ  ಶಿಲ್ಪ ಮನಮೋಹಕವಾಗಿದೆ. ಸುಮಾರು 6 ಅಡಿ ಎತ್ತರ ಇರುವ ಈ ವಿಗ್ರಹದ ಅರಳುಗುಪ್ಪೆ ಉಮಾ ಮಹೇಶ್ವರ, kalleswara temple, ಕಲ್ಲೇಶ್ವರ ದೇವಾಲಯ, ಕನ್ನಡರತ್ನ.ಕಾಂ, kannadaratna.com,  ಅರಳುಗುಪ್ಪೆ ದೇವಾಲಯ, Araluguppe keshava templeಪ್ರಭಾವಳಿಯಲ್ಲಿ ಅಸಮ ಅಂತರದಲ್ಲಿ ನೃತ್ಯ ಮಾಡುತ್ತಿರುವ ಸ್ತ್ರೀಶಿಲ್ಪಗಳಿವೆ. ಶಿವನ ಮುಡಿ ಹಾಗೂ ಜಟೆಯನ್ನು ಸುಂದರವಾಗಿ ಮೂಡಿಸಲಾಗಿದೆ. ಪಾದದ ಬಳಿ ಬಸವನ ಮೂರ್ತಿಯನ್ನೂ ಕಡೆಯಲಾಗಿದೆ. ಇದರ ಪಕ್ಕದಲ್ಲಿರುವ ಗುಡಿಯಲ್ಲಿ ಸೂರ್ಯನಾರಾಯಣನ ವಿಗ್ರಹವಿದೆ.

ಸುತ್ತಲೂ ಐದು ಪುಟ್ಟ ದೇವಾಲಯಗಳಿದ್ದು ಎಲ್ಲ ದೇಗುಲದಲ್ಲೂ ಸುಂದರ ಹಾಗೂ ಬೃಹತ್ ಶಿವಲಿಂಗಗಳಿವೆ. ಈಶಾನ್ಯ ಭಾಗದಲ್ಲಿ ಮುರುಕು ಮಂಟಪವೂ ಇದೆ. ಪಕ್ಕದಲ್ಲಿ ಹಾಳು ಬಾವಿಯಿದ್ದು ಇದರ ಸುತ್ತಲೂ ಸುಂದರ ಕೆತ್ತನೆ ಇರುವ ನಾಗರಕಲ್ಲುಗಳಿವೆ. ಇದರ ಪಕ್ಕದಲ್ಲಿ ವೀರಗಲ್ಲು, ಮಾಸ್ತಿಗಲ್ಲುಗಳು ಹಾಗೂ ಕೆಲವು ಶಾಸನಗಳಿವೆ.   

ಅರಳುಗುಪ್ಪೆಗೆ ಹೋಗಬೇಕೆಂದರೆ ರೈಲು ಪ್ರಯಾಣವೇ ಸೂಕ್ತ. ಬೆಂಗಳೂರು ಶಿವಮೊಗ್ಗ ಪ್ಯಾಸೆಂಜರ್ ರೈಲು ಅರಳುಗುಪ್ಪೆಯಲ್ಲಿ ನಿಲ್ಲುತ್ತದೆ. ಬೆಂಗಳೂರಿನಿಂದ ಬೆಳಗ್ಗೆ 6-30ಕ್ಕೆ ಹೊರಡುತ್ತದೆ. ಬೆಂಗಳೂರು ತಿಪಟೂರು ನಡುವೆ ಕಿಬ್ಬನಹಳ್ಳಿ (ಕೆ.ಬಿ) ಕ್ರಾಸ್ ನಲ್ಲಿ ಇಳಿದು, ಆಟೋ ಮಾಡಿಕೊಂಡು ಅರಳುಗುಪ್ಪೆಗೆ ಹೋಗಬಹುದು. ತೆಂಗಿನ ನಾಡು ತಿಪಟೂರಿನಿಂದ ನೇರ ಬಸ್ ಸೌಕರ್ಯವಿದೆ.

 ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು