|
ಅದ್ಭುತ ಶಿಲ್ಪಕಲೆಯ ಬೀಡು ಅರಳಗುಪ್ಪೆ
ಈ ದೇವಾಲಯದ ಒಂದೊಂದೂ ಭಿತ್ತಿಯೂ ಸೂಕ್ಷ್ಮ ಕುಸುರಿ ಕೆತ್ತನೆಗಳಿಂದ ಕಣ್ಮನ ಸೆಳೆಯುತ್ತವೆ. ವಿಷ್ಣುವಿನ ದಶಾವತಾರದ ಕೆತ್ತನೆಗಳು ಇಲ್ಲಿವೆ. ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ದೇವಾಲಯವನ್ನು ಪ್ರಮುಖ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿದ್ದರೂ ಸೂಕ್ತ, ಸಂರಕ್ಷಣೆ ಇಲ್ಲದ ಕಾರಣ ಸುಂದರ ವಿಗ್ರಹಗಳ ಮುಖ ವಿರೂಪಗೊಂಡಿದೆ. ತುಂಟು ಹುಡುಗರು ಕಲ್ಲಿನಿಂದ ಅತ್ಯಂತ ಮನೋಹರವಾದ ಶಿಲ್ಪಗಳ ಮುಖವನ್ನು ಜಜ್ಜಿ ಹಾಳು ಮಾಡಿದ್ದಾರೆ.
ಗರ್ಭಗೃಹದ ಪ್ರವೇಶದ್ವಾರರದ ಬಲಕ್ಕೆ ಇರುವ ಗಣಪತಿ ವಿಗ್ರಹ ತುಂಬ ಸುಂದರವಾಗಿದೆ. ಎಡಭಾಗದಲ್ಲಿರುವ ಮಹಿಷಾಸುರಮರ್ದಿನಿಯ ವಿಗ್ರಹ ಮನಮೋಹಕವಾಗಿದೆ. ದೇವಾಲಯದ ಪ್ರಧಾನ ಗರ್ಭಗುಡಿಯಲ್ಲಿ ಚನ್ನಕೇಶವನ ವಿಗ್ರಹ ಇದೆ. 6 ಅಡಿ ಎತ್ತರವಿರುವ ಈ ಮೂರ್ತಿ ಜೀವಂತ ಪ್ರತಿಮೆಯಂತೆ ಕಾಣುತ್ತದೆ. ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆ ಇದೆ.
ದೇವಾಲಯದಲ್ಲಿ ಹತ್ತು ಭುವನೇಶ್ವರಿಗಳಿದ್ದು, ಒಂದಕ್ಕಿಂತ ಒಂದು ಕಲಾತ್ಮಕವಾಗಿವೆ. ಎಲ್ಲ ಭಿತ್ತಿಗಳೂ ಹೊಯ್ಸಳ ಶಿಲ್ಪಿಗಳ ಕಲಾನೈಪುಣ್ಯತೆಗೆ ಸಾಕ್ಷಿಯಾಗಿವೆ. ದಕ್ಷಿಣದಲ್ಲಿ ದೇವಾಲಯಕ್ಕೆ ಹೊಂದಿಕೊಂಡಂತೆ ಉಗ್ರನರಸಿಂಹನ ದೇವಾಲಯವಿದೆ. ಈ ದೇವಾಲಯದ ಗರ್ಭಗೃಹದಲ್ಲಿ ಹಿರಣ್ಯಕಶುಪಿವಿನ ಕರುಳು ಬಗೆದು ಮಾಲೆ ಹಾಕಿಕೊಳ್ಳುತ್ತಿರುವ ಉಗ್ರನರಸಿಂಹನ ಕೆತ್ತನೆಯಂತೂ ಮನಮೋಹಕವಾಗಿದೆ.
ದೇವಾಲಯದ ಸುತ್ತಲಿನ ಬಿತ್ತಿಗಳಲ್ಲಿ ಬಾಲಕೃಷ್ಣನ
ಲೀಲೆಗಳು, ಯಕ್ಷ, ಕಿನ್ನರ,
ಈ ಊರಿನಲ್ಲಿರುವ ಕಲ್ಲೇಶ್ವರ ದೇವಾಲಯವೂ ಸುಂದರವಾಗಿದೆ. ಇಷ್ಟೆಲ್ಲಾ ಕಲಾ ವೈಭವವಿದ್ದರೂ ಈ ದೇವಾಲಯ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗದಿರುವುದು ದುರ್ದೈವವೇ ಸರಿ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಊರಿಗೆ ತಲುಪಲು ರಸ್ತೆ ಸಂಪರ್ಕವೂ ಚೆನ್ನಾಗಿಲ್ಲ. ಈ ದೇವಾಲಯವೇನಾದರೂ ಬೇಲೂರು, ಹಳೆಬೀಡು, ಶ್ರವಣಬೆಳಗೊಳದ ಸುತ್ತಮುತ್ತ ಇದ್ದಿದ್ದರೆ ಇದರ ಸ್ವರೂಪವೇ ಬದಲಾಗುತ್ತಿತ್ತು. ಹೋಗುವುದು ಹೇಗೆ ಅರಳುಗುಪ್ಪೆಗೆ ಹೋಗಬೇಕೆಂದರೆ ರೈಲು ಪ್ರಯಾಣವೇ ಸೂಕ್ತ. ಬೆಂಗಳೂರು ಶಿವಮೊಗ್ಗ ಪ್ಯಾಸೆಂಜರ್ ರೈಲು ಅರಳುಗುಪ್ಪೆಯಲ್ಲಿ ನಿಲ್ಲುತ್ತದೆ. ಬೆಂಗಳೂರಿನಿಂದ ಬೆಳಗ್ಗೆ 6-30ಕ್ಕೆ ಹೊರಡುತ್ತದೆ. ಬೆಂಗಳೂರು ತಿಪಟೂರು ನಡುವೆ ಕಿಬ್ಬನಹಳ್ಳಿ (ಕೆ.ಬಿ) ಕ್ರಾಸ್ ನಲ್ಲಿ ಇಳಿದು, ಆಟೋ ಮಾಡಿಕೊಂಡು ಅರಳುಗುಪ್ಪೆಗೆ ಹೋಗಬಹುದು. ತಿಪಟೂರಿನಿಂದ 14 ಕಿಲೋ ಮೀಟರ್ ದೂರದಲ್ಲಿರುವ ಇಲ್ಲಿಗೆ ನೇರ ಬಸ್ ಸೌಕರ್ಯವೂ ಇದೆ. | |||