|
ದಕ್ಷಿಣ ಕಾಶೀ -ಅಂತರಗಂಗೆ *ಟಿ.ಎಂ.ಸತೀಶ್
ಅಂತರಗಂಗೆ ಹೆಸರೇ ಹೇಳುವಂತೆ ಅಂತರ್ಮುಖಿಯಾದ ಗಂಗೆ ಹರಿವ ಕ್ಷೇತ್ರ. ಭಗೀರಥನ ತಪಸ್ಸಿನ ಫಲವಾಗಿ ಸುರಲೋಕದಿಂದ ಭೂಲೋಕಕ್ಕೆ ಬಂದು, ಶಿವನ ಜಟೆಯಿಂದ ಮರುಹುಟ್ಟು ಪಡೆದು ಹರಿವ ಸಾಕ್ಷಾತ್ ಗಂಗಾಮಾತೆ ಕಲ್ಲಿನ ಬಸವನ ಬಾಯಿಯಿಂದ ಇಲ್ಲಿ ಭೂಸ್ಪರ್ಶ ಮಾಡುತ್ತಾಳೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ.
ಬರಗಾಲವಿರಲಿ, ಕ್ಷಾಮ, ಡಾಮರವೇ ಇರಲಿ ಇಲ್ಲಿನ ಬಸವನ ಬಾಯಿಂದ ಬರುವ ನೀರು ಬರುತ್ತದೆ. ಕಳೆದ 40 ವರ್ಷದಿಂದ ಒಂದು ದಿನವೂ ಇಲ್ಲಿ ನೀರು ನಿಂತಿದ್ದನ್ನು ನಾವು ಕಂಡಿಲ್ಲ ಎನ್ನುತ್ತಾರೆ ಸ್ಥಳೀಯರು. ಆದರೆ ಈ ನಂದಿಯ ಬಾಯಿಂದ ಬರುವ ಜಲದ ಸೆಲೆ ಅರ್ಥಾತ್ ಜಲ ಮೂಲ ಎಲ್ಲಿದೆ ಎಂಬುದು ಯಾರಿಗೂ ತಿಳಿದಿಲ್ಲ.
ಬೆಟ್ಟದ ಮೇಲೆ ಪುರಾತನವಾದ ಕಾಶಿ ವಿಶ್ವೇಶ್ವರನ ಸನ್ನಿಧಿ ಇದೆ. ವಿಶೇಷವಾದ ಕೆತ್ತನೆಗಳೇನೂ ಇಲ್ಲದ ಸಾಧಾರಣ ಗುಡಿಯ ಗರ್ಭಗೃಹದಲ್ಲಿರುವ ಕಾಶಿ ವಿಶ್ವೇಶ್ವರನ ಲಿಂಗ ಮನಮೋಹಕವಾಗಿದೆ. ಪಕ್ಕದಲ್ಲಿ ಕಲ್ಯಾಣಿ ಇದ್ದು, ಗಣಪತಿಯ ಪುಟ್ಟ ಗುಡಿ ಇದೆ. ಅದೇ ಪ್ರಾಕಾರದಲ್ಲಿ ಮಂಟಪದಲ್ಲಿ ಎರಡು ನಂದಿಯ ವಿಗ್ರಹಗಳಿದ್ದು, ಒಂದು ನಂದಿಯ ಬಾಯಿಂದ ನಿರಂತರವಾಗಿ ಜಲಧಾರೆ ಹರಿಯುತ್ತದೆ. ಪಕ್ಕದಲ್ಲೇ ಆಂಜನೇಯನ ಮೂರ್ತಿಯೂ ಇದೆ.
ಮೆಟ್ಟಿಲುಗಳನ್ನೇರಿ ಹೋಗುವ ಯಾತ್ರಿಕರು ದಣಿವಾರಿಸಿಕೊಳ್ಳಲೆಂದು ಮಾರ್ಗಮಧ್ಯದಲ್ಲಿ
ಜಿಂಕೆಯ ಬೀಡಿದೆ. ಇಲ್ಲಿ ತಂತಿಬೇಲಿಯ ಗೂಡಿನಲ್ಲಿ ಎತ್ತರದ ಕೊಂಬಿನ ಜಿಂಕೆಯಿದೆ.
ಮಕ್ಕಳು ಇಲ್ಲಿ
ಪಕ್ಕದಲ್ಲೇ ಉರುಟುಕಲ್ಲುಗಳ ಬೆಟ್ಟದಲ್ಲಿ ವೀಕ್ಷಣಾಗೋಪುರವೂ ಇದೆ. ಇಲ್ಲಿ ನಿಂತು ಸುತ್ತಲ ಪ್ರದೇಶ ನೋಡುವುದೇ ಒಂದು ಅಪೂರ್ವ ಅನುಭವ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||