|
ಮುಖಪುಟ
/ನಮ್ಮದೇವಾಲಯಗಳು
ಅಮೃತಾಪುರ ಅಮೃತೇಶ್ವರ ದೇವಾಲಯ
ಹೊಯ್ಸಳರ ದೊರೆ ಎರಡನೇ ಬಲ್ಲಾಳನ ದಂಡನಾಯಕ ಅಮೃತೇಶ್ವರ ಕ್ರಿ.ಶ.1196ರಲ್ಲಿ ಇಲ್ಲಿ
ಅಮೃತೇಶ್ವರ ದೇವಾಲಯ ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ. ಸೂಕ್ಷ್ಮ ಕೆತ್ತನೆಗಳ
ಕಲಾಶ್ರೀಮಂತಿಕೆಯಿಂದ ಕೂಡಿದ ಈ ದೇವಾಲಯ ನೋಡುಗರ ಹೃನ್ಮನ ಸೆಳೆಯುತ್ತದೆ.
ಹೊಯ್ಸಳ ದೊರೆಗಳ ಕಲೋಪಾಸನೆಗೆ ಸಾಕ್ಷಿಯಾಗಿರುವ ಈ ದೇವಾಲಯ ಹಚ್ಚಹಸುರಿನಿಂದ ಕೂಡಿದ
ಪ್ರದೇಶದಲ್ಲಿದ್ದು
ದೇವಾಲಯದ ಹೊರಭಿತ್ತಿಗಳಲ್ಲಿ ಭವ್ಯವಾದ ಶಿಲ್ಪಾಲಂಕರಣಗಳಿವೆ. ಸುತ್ತಲೂ ಇರುವ ಅರೆ
ಮಂಟಪ, ಲತಾ ಸುರಳಿಗಳು
ಹಾಗೂ ಅರೆಗೋಪುರ ಶಿಲ್ಪದ ಮೇಲಿನ ಪಟ್ಟಿಕೆಯಲ್ಲಿರುವ ಶಿಲ್ಪಗಳಂತೂ ಅತ್ಯಂತ ಮನಮೋಹಕ. ದೇವಾಲಯಕ್ಕೆ ಒಂದೇ ಒಂದು ವಿಮಾನ ಗೋಪುರ
ಇದ್ದು, ಇದು ಏಕ ಕೂಟ ದೇವಾಲಯವಾಗಿದೆ.
ಶಿಥಿಲವಾಗಿದ್ದ ಈ ದೇವಾಲಯಕ್ಕೆ ಹೊರಗಿನಿಂದ ಸಾಧಾರಣ ಕಲ್ಲು ಕಂಬಗಳನ್ನು
ಆಧಾರವಾಗಿಟ್ಟು ರಕ್ಷಿಸಲಾಗಿದೆ.
ಬೆಂಗಳೂರು ಮಹಾನಗರದಿಂದ 245 ಕಿಲೋ ಮೀಟರ್ ದೂರದಲ್ಲಿರುವ ಅಮೃತಾಪುರ,
ಚಿಕ್ಕಮಗಳೂರಿನಿಂದ 67
ಹಾಗೂ ತರೀಕೆರೆಯಿಂದ 4 ಕಿಲೋ ಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ ತುಮಕೂರು,
ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಮೂಲಕ ಅಮೃತಾಪುರಕ್ಕೆ
ಹೋಗಬಹುದು. ಅರಸೀಕೆರೆವರೆಗೆ ರೈಲು ಸೌಲಭ್ಯವೂ ಇದೆ.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-22352901 /22352909 /22352903
Email : kstdc@vsnl.in | |||